
15th June 2025
ಬೆಳಗಾವಿ- ಬೈಲಹೊಂಗಲ ತಾಲೂಕಿನ ಬೆಳವಡಿಯ ನಿವಾಸಿ ಮತ್ತು ನೇಸರಗಿ ಪೋಲಿಸ್ ಠಾಣೆಯ ಹವಾಲ್ದಾರ ಲಕ್ಷ್ಮಣ ಡೊಂಬರ ಅವರಿಗೆ ಧಾರವಾಡ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಸಾಂಸ್ಕೃತಿಕ ಭವನ ದಲ್ಲಿ ನಾಟ್ಯಸ್ಪೂರ್ತಿ ಆರ್ಟ್ & ಕಲ್ಚರಲ್ ಅಕಾಡೆಮಿ ಹಮ್ಮಿಕೊಂಡಿದ್ದ *"ರಾಜ್ಯ ಮಟ್ಟದ ಬಸವಶ್ರೀ ಪ್ರಶಸ್ತಿ-೨೦೨೫"* ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಮನಸೂರ ರೇವಣಸಿದ್ದೇಶ್ವರ ಮಠದ ಡಾ. ಶ್ರೀ ಬಸವರಾಜ ದೇವರು *ಬಸವಶ್ರೀ ಪ್ರಶಸ್ತಿ -೨೦೨೫* ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ನವಲಗುಂದ ಶಾಸಕರು ಎನ್. ಎಚ್. ಕೋನರಡ್ಡಿ, ಧಾರವಾಡ ಗ್ರಾಮೀಣ ಮಾಜಿ ಶಾಸಕಿಯರಾದ ಶ್ರೀಮತಿ ಸೀಮಾ ಅಶೋಕ ಮಸೂತಿ, ಧಾರವಾಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಜಾನಪದ ಕಲಾವಿದರಾದ ಇಮಾಮಸಾಬ ವಲ್ಲಪ್ಪಣ್ಣವರ, ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ.ವಾಯ್.ಮೆಣಸಿನಕಾಯಿ, ಹಾಸ್ಯ ಕಲಾವಿದರು ಹಾಗೂ ಮೊಬೈಲ್ ಮಲ್ಲ್ ಎಂದೆ ಖ್ಯಾತರಾಗಿದ್ದ ಮಲ್ಲಪ್ಪ ಹೊಂಗಲ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸದಾನಂದ ಸ. ಬಂಗೆಣ್ಣನವರ ಉಪಸ್ಥಿತರಿದ್ದರು.
ಅಹಿಂದ ನ್ಯಾಯವಾದಿಗಳ ಸಂಘದ ವತಿಯಿಂದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಮನವಿ*